ಉಡುಪಿಯಲ್ಲಿ ಬೆಂಗಳೂರು ಜೋಡಿಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರ ಮೇಲೆ ಕೆಂಡಕಾರಿದ ಯುವತಿ ತಾಯಿ ಕೆಂಡಕಾರಿದ್ದಾರೆ. ಘಟನೆಯ ಬಳಿಕವೇ ಟಿವಿಯಲ್ಲಿ ಯುವಕನನ್ನು ನೋಡಿದ್ದು. ಆತ ಯಾರು ಅಂತನು ಗೋತ್ತಿಲ್ಲ ನಮಗೆ. ಪ್ರೀತಿ ವಿಚಾರವಾಗಲಿ ಅವನ ಬಗ್ಗೆಯಾಗಲಿ ನಮ್ಮ ಬಳಿ ಮಾತನಾಡಿರಲಿಲ್ಲ. ಮಗಳ ನೆನೆದು ಕಣ್ಣಿರು ಹಾಕುತ್ತಲೇ ಮಗಳ ಪ್ರಿಯಕರನ ಬಗ್ಗೆ ಅಸಮಾಧಾನವನ್ನು ತಾಯಿ ರತ್ನಮ್ಮ ಹೊರಹಾಕಿದ್ದಾರೆ. ಮಗಳು ಇಂಟರ್ ವ್ಯೂಗೆ ಹೋಗ್ತೀನಿ ಅಂತಾ ಹೋದ್ಲು. ಹೋದ ದಿನದಿಂದ ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಳು. ಪ್ರೀತಿ ಪ್ರೇಮ ಅಂತಾ ಯಾವತ್ತೂ ನಮ್ಮ ಬಳಿ ಹೇಳಿಲ್ಲ ಮಗಳು ಹೇಳಿರಲಿಲ್ಲ. 23 ವರ್ಷ ಬೆಳೆಸಿದ ಮಗಳು ಈ ತರಹ ಹೋಗ್ತಾಳೆ ಅಂತ ಕನಸಲ್ಲೂ ಯೋಚಿಸಿರಲಿಲ್ಲ. ನಮಗೆ ಈ ರೀತಿ ಎಲ್ಲಾ ಆಗುತ್ತೆ ಅನ್ನೋದು ಗೊತ್ತೇ ಆಗಲಿಲ್ಲ. ಎಂದು ಕಣ್ಣೀರಿಟ್ಟರು. ಮಗಳ ಪೋನ್ ಸ್ವಿಚ್ ಆಫ್ ಆಗಿದ್ದರಿಂದ ದೂರು ಕೊಟ್ಟಿದ್ದೀವಿ. ಬೆಳಗ್ಗೆ ಮೂರು ಗಂಟೆಗೆ ಹುಡುಗನ ಮೊಬೈಲ್ ನಿಂದ ನನ್ನ ಮಗನ ಮೊಬೈಲ್‍ಗೆ ಮಮ್ಮಿ ಡ್ಯಾಡಿ ನನ್ನ ಕ್ಷಮಿಸಿ ಬಿಡಿ ಅಂತ ಮೆಸೇಜ್ ಬಂದಿದೆ. ಬುಧವಾರ ಹೆಬ್ಬಾಳದಲ್ಲಿ ಇಂಟರ್ ವ್ಯೂ ಇದೆ ಅಂತ ಹೋಗಿದ್ಲು ಈ ಸ್ಥಿತಿಯಲ್ಲಿ ನೋಡುವಂತಾಗಿದೆ ಅಂತ ಯುವತಿ ಜ್ಯೋತಿ ತಾಯಿ ರತ್ಮಮ್ಮ ಕಣ್ಣೀರು ಹಾಕಿದ್ದಾರೆ.<br /><br />#PublicTV #Bengaluru #Udupi<br />